Skip to main content

ಕೇರಳದಲ್ಲಿ 62 ಜನರಿಗೆ ಕೂಡ ಕೋವಿಡ್ -19 ದೃಡಪಡಿಸಲಾಗಿದೆ, 10 ಜನರು ಗುಣಮುಖರಾದರು

22 ಹೊಸ ಹಾಟ್ ಸ್ಪಾಟ್‌ಗಳು

ಕೇರಳದಲ್ಲಿ 62 ಜನರಿಗೆ ಕೂಡ ಶುಕ್ರವಾರ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಪಾಲಕ್ಕಾಡ್‌ ಜಿಲ್ಲೆಯಿಂದ 14 ಮಂದಿಗೆ, ಕಣ್ಣೂರು ಜಿಲ್ಲೆಯಿಂದ 7 ಮಂದಿಗೆ, ತ್ರಿಶೂರ್‌ ಜಿಲ್ಲೆಯಿಂದ 6 ಮಂದಿಗೆ, ತಿರುವನಂತಪುರಂ, ಪಥನಮತ್ತಿಟ್ಟ, ಮಲಪ್ಪುರಂ ಜಿಲ್ಲೆಗಳಿಂದ ತಲಾ 5 ಮಂದಿಗೆ, ಎರ್ನಾಕುಲಂ, ಕಾಸರಗೋಡು ಜಿಲ್ಲೆಗಳಿಂದ ತಲಾ ನಾಲ್ವರಿಗೆ ಆಲಪ್ಪುಳ ಜಿಲ್ಲೆಯಿಂದ ಮೂವರಿಗೆ, ಕೊಲ್ಲಂ,ವಯನಾಡ್ ಜಿಲ್ಲೆಗಳಿಂದ ತಲಾ ಇಬ್ಬರಿಗೆ,ಕೋಟಯಂ,ಇಡುಕ್ಕಿ ಮತ್ತು ಕೋಳಿಕೋಡ್ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಡಿಸಿರುವುದು. ಈ ಪೈಕಿ 33 ಮಂದಿ ವಿದೇಶದಿಂದ  (ಯು.ಎ.ಇ -13, ಕುವೈತ್ -9, ಸೌದಿ ಅರೇಬಿಯಾ -7, ಕತಾರ್ -3, ಒಮಾನ್ -1) ಮತ್ತು 23 ಮಂದಿ ಇತರ ರಾಜ್ಯಗಳಿಂದ (ತಮಿಳುನಾಡು -10, ಮಹಾರಾಷ್ಟ್ರ -10, ಕರ್ನಾಟಕ -1, ದೆಹಲಿ -1, ಪಂಜಾಬ್ -1) ಬಂದವರು. ಇದಲ್ಲದೆ ಇಬ್ಬರು ಏರ್ ಇಂಡಿಯಾ ನೌಕರರು ಸಹ ಸೋಂಕಿಗೆ ಒಳಗಾಗಿದ್ದಾರೆ.

ರೋಗ ಪತ್ತೆಯಾದವರಲ್ಲಿ ಇಬ್ಬರು ಕೈದಿಗಳು (ತಿರುವನಂತಪುರಂ) ಮತ್ತು ಒಬ್ಬ ಆರೋಗ್ಯ ಕಾರ್ಯಕರ್ತ (ಪಾಲಕ್ಕಾಡ್) ಸೇರಿದ್ದಾರೆ. ಎರ್ನಾಕುಲಂ ಜಿಲ್ಲೆಯ ವ್ಯಕ್ತಿಯೊಬ್ಬರು ಸಂಪರ್ಕದಿಂದ ಸೋಂಕಿಗೆ ಒಳಗಾಗಿದ್ದಾರೆ.

 

ರೋಗ ದೃಡಪಡಿಸಿ ಕೋಟಯಂ  ಜಿಲ್ಲೆಯಲ್ಲಿ ಚಿಕಿತ್ಸೆಯಲ್ಲಿದ್ದ ಪಥನಮತ್ತಿಟ್ಟ ನಿವಾಸಿ ಜೋಶಿ ಶುಕ್ರವಾರ ನಿಧನರಾದರು.

 

ರೋಗ ದೃಡಪಡಿಸಿ ಚಿಕಿತ್ಸೆಯಲ್ಲಿದ್ದ 10 ಜನರ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ವಯನಾಡ್‌ ಜಿಲ್ಲೆಯಿಂದ ತಲಾ ಐದು ಜನರ, ಕಣ್ಣೂರು ಜಿಲ್ಲೆಯಿಂದ ಮೂವರ(2 ಕೋಳಿಕೋಡ್‌ ನಿವಾಸಿ ), ಮಲಪ್ಪುರಂ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣಾ ಫಲಿತಾಂಶ ಋಣಾತ್ಮಕವಾಗಿರುವುದು. ಈವರೆಗೆ 577 ಜನರಿಗೆ ಈ ರೋಗ ಪತ್ತೆಯಾಗಿದ್ದು ಇನ್ನು ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 565 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.

 

ವಿಮಾನ ನಿಲ್ದಾಣದ ಮೂಲಕ 15,926 ಜನರು,ಸೀಪೋರ್ಟ್ ಮೂಲಕ 1621 ಜನರು, ಚೆಕ್ ಪೋಸ್ಟ್ ಮೂಲಕ 94,812 ಜನರು ಮತ್ತು ರೈಲು ಮೂಲಕ 8932 ಜನರು ಸೇರಿದಂತೆ ಒಟ್ಟು 1,21,291 ಜನರು ರಾಜ್ಯಕ್ಕೆ ಆಗಮಿಸಿದ್ದಾರೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,24,167 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 1,23,087 ಜನರು ಮನೆ / ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ನಲ್ಲಿ ಮತ್ತು 1080 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 231 ಜನರನ್ನು ಶುಕ್ರವಾರ ಆಸ್ಪತ್ರೆಗೆ ದಾಖಲಿಸಲಾಗಿದೆ.

 

ಇಲ್ಲಿಯವರೆಗೆ, 62,746 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ.ಇದರಲ್ಲಿ ಲಭ್ಯವಾದ 60,448 ಮಾದರಿಗಳ, ತಪಾಸಣಾ ಫಲಿತಾಂಶ ಋಣಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕಾರ್ಯಕರ್ತರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ ಒಟ್ಟು 11,468 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 10,635 ಮಾದರಿಗಳು ನಕಾರಾತ್ಮಕವಾಗಿವೆ.

 

22 ಪ್ರದೇಶಗಳನ್ನು ಕೂಡ ಹಾಟ್ ಸ್ಪಾಟ್‌ಗಳಿಗೆ    ಸೇರಿಸಲಾಗಿದೆ. ತಿರುವನಂತಪುರಂ ಜಿಲ್ಲೆಯ ಪುಲ್ಲಂಪಾರ, ಪುಲಿಯಮಥ್, ಕರೋಡೆ, ಮುಡಕ್ಕಲ್, ವಾಮನಪುರಂ, ಕೋಳಿಕೋಡ್ ಜಿಲ್ಲೆಯ, ಥುನ್ನರಿ, ಪುರಮೇರಿ, ನಾಡಾಪುರಂ, ಕುನ್ನುಮ್ಮೆಲ್, ಕುಟ್ಟಿಯಾಡಿ, ವಳಯಂ, ವಡಕರ ಪುರಸಭೆ, ಕಣ್ಣೂರು ಕಣ್ಣಪುರಂ, ಮುಂಡೇರಿ, ಮುಳಪ್ಪಿಲಂಗಾಡ್, ಕಾಸರಗೋಡು ಜಿಲ್ಲೆಯ ಕುಂಬಳ,ಪಾಲಕ್ಕಾಡ್ ಜಿಲ್ಲೆಯ ಕೋಪ್ಪಂ,ಒಟ್ಟಪ್ಪಾಲಂ, ವಾಣಿಯಕುಳಂ,ಆನಕ್ಕರ, ಅಲನಲ್ಲೂರ್ ಮತ್ತು ಕೊಟ್ಟೋಪಡಂ ಹೊಸ ಹಾಟ್ ಸ್ಪಾಟ್‌ಗಳು. ಮೂರು ಪ್ರದೇಶಗಳನ್ನು ಹಾಟ್ ಸ್ಪಾಟ್‌ನಿಂದ ಹೊರಹಾಕಲಾಯಿತು. ಪ್ರಸ್ತುತ 101 ಹಾಟ್ ಸ್ಪಾಟ್‌ಗಳಿವೆ.

date