Skip to main content

ಕೇರಳದಲ್ಲಿ  ಹತ್ತು ಮಂದಿಗೆ ಕೋವಿಡ್ 19; ಹಾಟ್‌ಸ್ಪಾಟ್‌ಗಳು 102 ಆಗಿವೆ

ಕೇರಳದಲ್ಲಿ 10 ಜನರಿಗೆ ಕೂಡ ಕೋವಿಡ್ 19 ದೃಡಪಡಿಸಿರುವುದಾಗಿ  ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಕೊಲ್ಲಂನಲ್ಲಿ ಆರು ಮಂದಿಗೆ, ತಿರುವನಂತಪುರಂ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಇಬ್ಬರಿಗೆ ರೋಗ ದೃಡಪಡಿಸಿರುವುದು. ಕೊಲ್ಲಂನಲ್ಲಿ ಐದು ಜನರಿಗೆ ಸಂಪರ್ಕದ ಮೂಲಕ ಸೋಂಕು ತಗುಲಿದೆ. ಒಬ್ಬರು ಆಂಧ್ರಪ್ರದೇಶದಿಂದ ಬಂದವರು. ತಿರುವನಂತಪುರಂನಲ್ಲಿ ಒಬ್ಬರು ತಮಿಳುನಾಡಿನಿಂದ  ಬಂದಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು. ಕಾಸರ್‌ಗೋಡ್ ನಲ್ಲಿ ಇಬ್ಬರಿಗೆ  ಸಂಪರ್ಕದ ಮೂಲಕ ರೋಗ ಬಂದಿದೆ.
ಹತ್ತು ಮಂದಿ ಗುಣಮುಖರಾಗಿದ್ದಾರೆ. ಕಣ್ಣೂರು, ಕೋಳಿಕೋಡ್ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತಲಾ ಮೂವರು ಮತ್ತು ಪಥನಮತ್ತಿಟ್ಟಂನಲ್ಲಿ ಒಬ್ಬರು ಗುಣಮುಖರಾದವರು. ರೋಗ ದೃಡಪಡಿಸಿದ ಮೂವರು ಆರೋಗ್ಯ ಕಾರ್ಯಕರ್ತರು. ಕಾಸರ್‌ಗೋಡ್ ಜಿಲ್ಲೆಯ ಒಬ್ಬ ದೃಶ್ಯ ಮಾಧ್ಯಮ ಕೆಲಸಗಾರನಿಗೂ ಈ ರೋಗ ದೃಡಪಡಿಸಲಾಗಿದೆ.ರಾಜ್ಯದಲ್ಲಿ ಒಟ್ಟು 495 ಜನರಿಗೆ ಈ ರೋಗ ದೃಡಪಡಿಸಲಾಗಿದೆ. ಪ್ರಸ್ತುತ123 ಜನರು ಚಿಕಿತ್ಸೆಯಲ್ಲಿದ್ದಾರೆ. 20,673 ಮಂದಿ ನಿರೀಕ್ಷಣದಲ್ಲಿದ್ದಾರೆ. ಈ ಪೈಕಿ 20,172 ಜನರು ಮನೆಗಳಲ್ಲಿ ಮತ್ತು 51ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣದಲ್ಲಿರುವರು. ಬುಧವಾರ 84 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಅತಿಥಿ ಕೆಲಸಗಾರರು, ಆರೋಗ್ಯ ಕಾರ್ಯಕರ್ತರು ಮತ್ತು ಸಮುದಾಯ ಸಂಪರ್ಕಗಳಲ್ಲಿರುವವರ 875 ಮಾದರಿಗಳನ್ನು ಪರಿಶೋಧಿಸಿದರಲ್ಲಿ ಲಭಿಸಿದ 801 ನಕಾರಾತ್ಮಕವಾಗಿವೆ ಎಂದು ಮುಖ್ಯಮಂತ್ರಿ ಹೇಳಿದರು. ಇಡುಕ್ಕಿಯಿಂದ ಮೂವರು ಸೇರಿದಂತೆ,ಪುನರ್ ಪರಿಶೀಲನೆಗಾಗಿ ಕಳುಹಿಸಲಾದ 25 ಮಾದರಿಗಳ ಫಲಿತಾಂಶಗಳು ಲಭಿಸಿಲ್ಲ.
ರಾಜ್ಯದಲ್ಲಿ ಹಾಟ್ ಸ್ಪಾಟ್‌ಗಳ ಸಂಖ್ಯೆ 102ಕ್ಕೆ ತಲುಪಿದೆ. ಇಡುಕ್ಕಿಯಲ್ಲಿನ ವಂಡಿಪೇರಿಯಾರ್ ಮತ್ತು ಕಾಸರಗೋಡಿನ ಅಜಾನೂರ್ ಗಳನ್ನು ಹಾಟ್‌ಸ್ಪಾಟ್‌ಗಳಾಗಿ ಪರಿವರ್ತಿಸಲಾಗಿದೆ.

 

ಬಂಜರುಭೂಮಿ ಕೃಷಿ ಯೋಜನೆ ಮುಂದಿನ ತಿಂಗಳಿನಿಂದ: ಮುಖ್ಯಮಂತ್ರಿ
* ಕೃಷಿ ಕ್ಷೇತ್ರದ ಯೋಜನೆಗಳಿಗೆ ಮೊದಲ ವರ್ಷದಲ್ಲಿ 3000 ಕೋಟಿ ವಿನಿಯೋಗಿಸಲಾಗುವುದು
ರಾಜ್ಯದ ಮೊತ್ತ ಬಂಜರುಭೂಮಿಯಲ್ಲಿ ಕೃಷಿ ಮಾಡಲು ಮತ್ತು ಆಹಾರ ಭದ್ರತೆಯನ್ನು ಖಾತ್ರಿಪಡಿಸುವ ಕೃಷಿ ಇಲಾಖೆಯ ಬೃಹತ್ ಯೋಜನೆಯನ್ನು ಮುಂದಿನ ತಿಂಗಳು ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ಕೃಷಿ ಕ್ಷೇತ್ರದ ವಿವಿಧ ಯೋಜನೆಗಳಿಗೆ ಮೊದಲ ವರ್ಷದಲ್ಲಿ ಮೂರು ಸಾವಿರ ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಸ್ಥಳೀಯ ಸ್ವಯಂಸಂಸ್ಥೆಗಳ, ಮತ್ತು ವಿವಿಧ ಇಲಾಖೆಗಳ ಯೋಜನಾ ವೆಚ್ಚದಿಂದ 1500 ಕೋಟಿ ರೂಪಾಯಿ ವಿನಿಯೋಗಿಸಲಾಗುವುದು. ಉಳಿದ ಮೊತ್ತವು ನಬಾರ್ಡ್ ಮತ್ತು ಸಹಕಾರಿ ವಲಯದಿಂದ ಪಡೆದ ಸಾಲವಾಗಿರುತ್ತದೆ. ಯೋಜನೆಯನ್ನು ಯಶಸ್ವಿಗೊಳಿಸಲು ಯುವಜನ ಕ್ಲಬ್‌ಗಳನ್ನು ರಚಿಸಲಾಗುವುದು.

ಕೃಷಿ ವಲಯವನ್ನು ಪುನರುಜ್ಜೀವನಗೊಳಿಸಿ ರೈತರ ಆದಾಯವನ್ನು ಹೆಚ್ಚಿಸುವುದು ಇದರ ಉದ್ದೇಶ. ವಿದೇಶದಿಂದ ಹಿಂದಿರುಗುವ ಪ್ರವಾಸಿಗರನ್ನು ಮತ್ತು ಯುವಕರನ್ನು ಕೃಷಿಯತ್ತ ಆಕರ್ಷಿಸಲಾಗುವುದು. ಕೃಷಿ ಇಲಾಖೆ ಸಿದ್ಧಪಡಿಸಿದ ಕರಡು ಯೋಜನೆ ಕುರಿತು ಸಚಿವರು ಮತ್ತು ಕಾರ್ಯದರ್ಶಿಗಳ ಸಭೆಯಲ್ಲಿ ಚರ್ಚಿಸಲಾಯಿತು. ಶೀಘ್ರದಲ್ಲೇ ಯೋಜನೆಗೆ ಅಂತಿಮ ರೂಪವನ್ನು ನೀಡಿ ಕಾರ್ಯಗತಗೊಳಿಸಲಾಗುವುದು.
ಇದರ ಜೊತೆಗೆ,ಜಾನುವಾರು ಸಂಪತ್ತಿನ ಹೆಚ್ಚಳ,ಮೀನು ಸಂಸ್ಕೃತಿಯ ಸುಧಾರಣೆ,ಮೊಟ್ಟೆ ಮತ್ತು ಹಾಲು ಉತ್ಪಾದನೆಗೆ, ಒತ್ತು ನೀಡಲಾಗುವುದು. ಅದರಂತೆ ಸ್ಥಳೀಯ ಸಂಸ್ಥೆಗಳು ವಾರ್ಷಿಕ ಯೋಜನೆಯಲ್ಲಿ ಮೇ 15 ರೊಳಗೆ ಬದಲಾವಣೆಗಳನ್ನು ಮಾಡಬೇಕು. ಪ್ರತಿ ಪಂಚಾಯಿತಿಯಲ್ಲಿನ ಬಂಜರು ಭೂಮಿಯ ವಿವರಗಳು ಸರ್ಕಾರ ಹೊಂದಿದೆ. ತೋಟ ಭೂಮಿ,ಗದ್ದೆಗಳನ್ನು ಒಳಗೊಂಡಂತೆ 1,09,000 ಹೆಕ್ಟೇರ್ ಬಂಜರು ಭೂಮಿ ಇದೆ ಎಂದು ಕೃಷಿ ಇಲಾಖೆ ಅಂದಾಜಿಸಿದೆ.

date