Skip to main content

ಕೇರಳದಲ್ಲಿ ಮೂವರಿಗೆ ಕೂಡ ಕೋವಿಡ್‌ ಚಿಕಿತ್ಸೆಯಲ್ಲಿರುವವರು 37 ಮಂದಿ 

 

ಕೇರಳದಲ್ಲಿ ಮಂಗಳವಾರ ಮೂವರಿಗೆ ಕೂಡ ಕೋವಿಡ್ -19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.ಸಂಪರ್ಕದ ಮೂಲಕ ರೋಗ ಬಂದ ಮೂವರೂ ವಯನಾಡ್ ಜಿಲ್ಲೆಯವರು. ಮಂಗಳವಾರ ಯಾರ ಫಲಿತಾಂಶಗಳು ನಕಾರಾತ್ಮಕವಾಗಿಲ್ಲ.

ಪ್ರಸ್ತುತ ಒಟ್ಟು 37 ಜನರು ರೋಗದಿಂದಾಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೇರಳದಲ್ಲಿ ಈವರೆಗೆ ಒಟ್ಟು 502 ಜನರಿಗೆ ಕೋವಿಡ್ -19 ದೃಡಪಡಿಸಿದೆ.ಈವರೆಗೆ462 ಜನರು  ಕೋವಿಡ್‌ನಿಂದ ಗುಣಮುಖರಾಗಿದ್ದಾರೆ.ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 21342 ಜನರು ನಿರೀಕ್ಷಣದಲ್ಲಿದ್ದಾರೆ. ಈ ಪೈಕಿ 21,034 ಮಂದಿ ಮನೆಗಳಲ್ಲಿ ಮತ್ತು 308 ಮಂದಿ ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು.

    ಇಲ್ಲಿಯವರೆಗೆ, 33,800 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಈ ಪೈಕಿ ಪರೀಕ್ಷಿಸಿದ 33265 ಮಾದರಿಗಳ ತಪಾಸಣಾ ಫಲಿತಾಂಶ ನಕಾರಾತ್ಮಕವಾಗಿವೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ ಒಟ್ಟು 2512 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 1979 ಮಾದರಿಗಳು ನಕಾರಾತ್ಮಕವಾಗಿವೆ.

ರಾಜ್ಯದಲ್ಲಿ ಮಂಗಳವಾರ ಹೊಸ ಹಾಟ್ ಸ್ಪಾಟ್‌ಗಳಿಲ್ಲ. ರಾಜ್ಯದಲ್ಲಿ ಒಟ್ಟು 84 ಹಾಟ್ ಸ್ಪಾಟ್‌ಗಳಿವೆ ಎಂದು ಮುಖ್ಯಮಂತ್ರಿ ತಿಳಿಸಿದರು.

date