ಇಂದು ಯಾರಿಗೂ ಕೋವಿಡ್ -19 ದೃಡಪಡಿಸಿಲ್ಲ 9 ಮಂದಿ ಗುಣಮುಖರಾದರು;ಇನ್ನು ಚಿಕಿತ್ಸೆಯಲ್ಲಿರುವವರು102 ಮಂದಿ;ಇದುವರೆಗೆ ಗುಣಮುಖರಾದವರು 392
ಹೊಸದಾಗಿ 10 ಹಾಟ್ ಸ್ಪಾಟ್‌ಗಳು ಕೂಡ
ತಿರುವನಂತಪುರಂ:ರಾಜ್ಯದಲ್ಲಿ ಇಂದು ನೆಮ್ಮದಿಯ ದಿನವಾಗಿದೆ. ಯಾರಿಗೂ ಕೋವಿಡ್ -19 ದೃಡಪಡಿಸಿಲ್ಲ ಎಂದು ಆರೋಗ್ಯ ಸಚಿವೆ ಕೆ.ಕೆ.ಶೈಲಾಜಾ ಟೀಚರ್ ಹೇಳಿದರು.ಅದೇ ಸಮಯ,9 ಜನರು ಇಂದು ಗುಣಮುಖರಾದರು. ಕಣ್ಣೂರು, ಕಾಸರಗೋಡು ಜಿಲ್ಲೆಗಳಲ್ಲಿ ತಲಾ ನಾಲ್ವರು ಮತ್ತು ಎರ್ನಾಕುಲಂ ಜಿಲ್ಲೆಯ ಒಬ್ಬರ ತಪಾಸಣಾ ಫಲಿತಾಂಶ ಇಂದು ಋಣಾತ್ಮಕವಾಗಿದೆ. ಇದರೊಂದಿಗೆ ಈವರೆಗೆ 392 ಜನರನ್ನು ಗುಣಮುಖರಾಗಿ ಬಿಡುಗಡೆ ಮಾಡಲಾಗಿದೆ.ಪ್ರಸ್ತುತ 102 ಜನರು ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 21,499 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 21,067 ಜನರು ಮನೆಗಳಲ್ಲಿ ಮತ್ತು 432 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 106 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ರೋಗಲಕ್ಷಣಗಳನ್ನು ಹೊಂದಿರುವ 27,150 ವ್ಯಕ್ತಿಗಳ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ಈ ಪೈಕಿ ಪರೀಕ್ಷಿಸಿದ 26,225 ಮಾದರಿಗಳು ನಕಾರಾತ್ಮಕ ಫಲಿತಾಂಶಗಳನ್ನು ಹೊಂದಿವೆ. ಸೆಂಟಿನೆಲ್ ಸರ್ವೈಲೆನ್ಸೆನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು ಮತ್ತು ಸಾಮಾಜಿಕವಾಗಿ ಸಕ್ರಿಯವಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪಿನಿಂದ 1862 ಮಾದರಿಗಳನ್ನು ಸಂಗ್ರಹಿಸಿದರಲ್ಲಿ ಲಭ್ಯವಾದ 999 ಮಾದರಿಗಳು ನಕಾರಾತ್ಮಕವಾಗಿವೆ. ಸಮುದಾಯದಲ್ಲಿ ಕೋವಿಡ್ ಪರೀಕ್ಷೆಯ ತೀವ್ರತೆಯ ಪರಿಣಾಮವಾಗಿ, 3128 ಮಾದರಿಗಳನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಒಟ್ಟು 3089 ಋಣಾತ್ಮಕವಾಗಿವೆ. ಇದರಲ್ಲಿ ಸಕಾರಾತ್ಮಕವಾದ ನಾಲ್ಕು ಅಂಶಗಳನ್ನು ಮೊದಲೇ ಘೋಷಿಸಲಾಯಿತು. ಮರು ಪರೀಕ್ಷೆಗೆ ಪ್ರಸ್ತಾಪಿಸಲಾದ 14 ಮಾದರಿಗಳನ್ನು ಪ್ರಯೋಗಾಲಯಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದಲ್ಲದೆ, ಪ್ರಯೋಗಾಲಯಗಳು ತಿರಸ್ಕರಿಸಿದ 21 ಮಾದರಿಗಳನ್ನು ಪ್ರಯೋಗಾಲಯದಲ್ಲಿ ಮರುಪರಿಶೀಲನೆಗೆ ಶಿಫಾರಸು ಮಾಡಲಾಗಿದೆ.
ಹೊಸದಾಗಿ 10 ಹಾಟ್ ಸ್ಪಾಟ್‌ಗಳನ್ನು ಕೂಡ ಸೇರಿಸಲಾಗಿದೆ. ಕಾಸರ್‌ಗೋಡ್ ಜಿಲ್ಲೆಯ ಉದುಮಾ, ಮಲಪ್ಪುರಂ ಜಿಲ್ಲೆಯ ಮಾರಂಚೇರಿ, ತಿರುವನಂತಪುರಂ ಜಿಲ್ಲೆಯ,ಕುಲತೂರ್, ಪಾರಾಶಾಲ, ಅಥಿಯನ್ನೂರ್, ಕರೋಡ್, ವೆಲ್ಲಾರಡ, ಅಂಬುರಿ, ಬಾಲರಾಮಪುರಂ ಮತ್ತು ಕುನ್ನತುಕಲ್ ಮುಂತಾದದವುಗಳು ಹೊಸ ಹಾಟ್ ಸ್ಪಾಟ್‌ಗಳು. ಇದರೊಂದಿಗೆ ಹಾಟ್ ಸ್ಪಾಟ್‌ಗಳ ಸಂಖ್ಯೆ 80ಕ್ಕೆ ತಲುಪಿದೆ.
- Log in to post comments