Skip to main content

ಕೇರಳದಲ್ಲಿ 7 ಜನರಿಗೆ ಕೂಡ ಕೋವಿಡ್ -19 ದೃಡಪಡಿಸಲಾಗಿದೆ; 4 ಮಂದಿ ಗುಣಮುಖರಾದರು

ಇನ್ನು ಚಿಕಿತ್ಸೆಯಲ್ಲಿರುವವರು 20 ಮಂದಿ;

ಇಲ್ಲಿಯವರೆಗೆ ಗುಣಮುಖರಾದವರು 489 ಮಂದಿ

ಹೊಸ ಹಾಟ್ ಸ್ಪಾಟ್‌ಗಳಿಲ್ಲ

 

ಕೇರಳದಲ್ಲಿ ಭಾನುವಾರ 7 ಜನರಿಗೆ ಕೋವಿಡ್ -19 ದೃಡಪಡಿಸಿರುವುದಾಗಿ ಆರೋಗ್ಯ ಸಚಿವೆ ಕೆ.ಕೆ. ಶೈಲಾಜಾ ಟೀಚರ್ ತಿಳಿಸಿದರು. ವಯನಾಡ್ ಜಿಲ್ಲೆಯ ಮೂವರಿಗೆ, ತ್ರಿಶೂರ್‌ ಜಿಲ್ಲೆಯ ಇಬ್ಬರಿಗೆ,ಎರ್ನಾಕುಲಂ ಮತ್ತು ಮಲಪ್ಪುರಂ ಜಿಲ್ಲೆಗಳಿಂದ ತಲಾ ಒಬ್ಬೊಬ್ಬರಿಗೆ ರೋಗ ದೃಡಪಟ್ಟಿರುವುದು.ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಯಲ್ಲಿರುವವರು 7 ರಂದು ಅಬುಧಾಬಿಯಿಂದ ವಿಮಾನದಲ್ಲಿ ಬಂದವರು. ವಯನಾಡ್ ಜಿಲ್ಲೆಯ ಇಬ್ಬರಿಗೆ ಸಂಪರ್ಕದ ಮೂಲಕ ಸೋಂಕು ಉಂಟಾಗಿದೆ. ವಯನಾಡ್ ಜಿಲ್ಲೆಯ ಒಬ್ಬರು ಮತ್ತು ಎರ್ನಾಕುಲಂ ಜಿಲ್ಲೆಯ ಒಬ್ಬರು ಚೆನ್ನೈನಿಂದ ಬಂದವರು. ಅದೇ ಸಮಯ, ರೋಗ ಖಚಿತವಾಗಿ ಚಿಕಿತ್ಸೆಯಲ್ಲಿದ್ದ ನಾಲ್ಕು ಜನರ ತಪಾಸಣಾ ಫಲಿತಾಂಶಗಳು ಭಾನುವಾರ ಋಣಾತ್ಮಕವಾಗಿವೆ. ಕಣ್ಣೂರು ಜಿಲ್ಲೆಯ 2 ಮಂದಿಯ, ಪಾಲಕ್ಕಾಡ್ ಮತ್ತು ಕಾಸರಗೋಡು ಜಿಲ್ಲೆಗಳಿಂದ ತಲಾ ಒಬ್ಬೊಬ್ಬರ ತಪಾಸಣೆ ನಡೆಸಿದ ಫಲಿತಾಂಶ ನಕಾರಾತ್ಮಕವಾಗಿರುವುದು. ಇದರೊಂದಿಗೆ ಹೆಚ್ಚು ರೋಗಿಗಳನ್ನು ಹೊಂದಿರುವ ಕಾಸರ್‌ಗೋಡ್ ಜಿಲ್ಲೆಯು ಕೋವಿಡ್ ಮುಕ್ತಾ ಜಿಲ್ಲೆ ಆಯಿತು.ಈವರೆಗೆ 489 ಜನರು ಕೋವಿಡ್‌ನಿಂದ ಗುಣಮುಖರಾಗಿದ್ದಾರೆ. ಪ್ರಸ್ತುತ 20 ಜನರು ರಾಜ್ಯದಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 26,712 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 26,350 ಜನರು ಮನೆಗಳಲ್ಲಿ ಮತ್ತು 362 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು.135 ಜನರನ್ನು ಇಂದು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 37,464 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 36,630 ಮಾದರಿಗಳ ತಪಾಸಣಾ ಫಲಿತಾಂಶ ಋಣಾತ್ಮಕವಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ, ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 3815 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 3525 ಮಾದರಿಗಳು ನಕಾರಾತ್ಮಕವಾಗಿವೆ. ರಾಜ್ಯದಲ್ಲಿ ಭಾನುವಾರ ಹೊಸ ಹಾಟ್ ಸ್ಪಾಟ್‌ಗಳಿಲ್ಲ. ಪ್ರಸ್ತುತ ಒಟ್ಟು 33 ಹಾಟ್ ಸ್ಪಾಟ್‌ಗಳಿವೆ.

date