Skip to main content

ಸೋಮವಾರವೂ ಕೇರಳದಲ್ಲಿ ಯಾರಿಗೂ ಕೋವಿಡ್ ದೃಡೀಕರಿಸಲಿಲ್ಲ; 61 ಮಂದಿ ಕೂಡ ಗುಣಮುಖರಾಗಿದ್ದಾರೆ

ಇನ್ನು ಚಿಕಿತ್ಸೆಯಲ್ಲಿರುವವರು 34 ಮಂದಿ; ಇದುವರೆಗೆ ಗುಣಮುಖರಾದವರು 462

ಹೊಸ ಹಾಟ್ ಸ್ಪಾಟ್‌ಗಳಿಲ್ಲ

 ಕೇರಳದಲ್ಲಿ ಸೋಮವಾರವೂ ಯಾರಿಗೂ ಕೋವಿಡ್ -19 ದೃಡಪಡಿಸಿಲ್ಲ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು. ಕಳೆದ ದಿನವೂ ಯಾರಿಗೂ ದೃಡಪಡಿಸಿರಲಿಲ್ಲ.ಅದೇ ಸಮಯ, ವಿವಿಧ ಜಿಲ್ಲೆಗಳಲ್ಲಿ 61 ಜನರ ಪರಿಶೋಧನಾ ಫಲಿತಾಂಶ ಋಣಾತ್ಮಕವಾಗಿ ಗುಣಮುಖರಾಗಿದ್ದಾರೆ. ಇದರೊಂದಿಗೆ ಈವರೆಗೆ 462 ಜನರು ಕೋವಿಡ್ ನಿಂದ ಗುಣಮುಖರಾಗಿದ್ದಾರೆ.ಪ್ರಸ್ತುತ 34 ಜನರು ರಾಜ್ಯಾದ್ಯಂತ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಣ್ಣೂರು ಜಿಲ್ಲೆಯಿಂದ 19 ಮಂದಿಯ, ಕೊಟ್ಟಾಯಂ ಜಿಲ್ಲೆಯಿಂದ 12 ಮಂದಿಯ, ಇಡುಕ್ಕಿ ಜಿಲ್ಲೆಯಿಂದ 11 ಮಂದಿಯ, ಕೊಲ್ಲಂ ಜಿಲ್ಲೆಯಿಂದ 9 ಮಂದಿಯ, ಕೋಳಿಕೋಡ್‌ ಜಿಲ್ಲೆಯಿಂದ 4 ಮಂದಿಯ ಮತ್ತು ಮಲಪ್ಪುರಂ, ಕಾಸರಗೋಡು ಮತ್ತು ತಿರುವನಂತಪುರಂ ಜಿಲ್ಲೆಗಳಿಂದ ತಲಾ ಇಬ್ಬರ ಪರಿಶೋಧನಾ ಫಲಿತಾಂಶ ಋಣಾತ್ಮಕವಾಗಿದ್ದು. ಇದರೊಂದಿಗೆ, ತಿರುವನಂತಪುರಂ, ಮಲಪ್ಪುರಂ ಮತ್ತು ಕೋಳಿಕೋಡ್‌ ಜಿಲ್ಲೆಗಳಲ್ಲಿ ಕೋವಿಡ್ ರೋಗಿಗಳಿಲ್ಲದ ಜಿಲ್ಲೆಯಾಗಿ ಮಾರ್ಪಟ್ಟವು.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 21,724 ಜನರು ನಿರೀಕ್ಷಣೆಯಲ್ಲಿದ್ದಾರೆ. ಈ ಪೈಕಿ 21,352 ಜನರು ಮನೆಗಳಲ್ಲಿ ಮತ್ತು 372 ಜನರು ಆಸ್ಪತ್ರೆಗಳಲ್ಲಿ ನಿರೀಕ್ಷಣೆಯಲ್ಲಿರುವರು. 62 ಜನರನ್ನು ಸೋಮವಾರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಲ್ಲಿಯವರೆಗೆ, 33,010 ವ್ಯಕ್ತಿಗಳ (ಓಗ್ಮೆಂಟೆಡ್ ಮಾದರಿ ಸೇರಿದಂತೆ) ಮಾದರಿಯನ್ನು ಪರಿಶೀಲನೆಗಾಗಿ ಕಳುಹಿಸಲಾಗಿದೆ. ಇದರಲ್ಲಿ ಲಭ್ಯವಾದ 32,315 ಮಾದರಿಗಳ ತಪಾಸಣಾ ಫಲಿತಾಂಶ ಋಣಾತ್ಮಕವಾಗಿದೆ. ಇದಲ್ಲದೆ, ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ ಆರೋಗ್ಯ ಕಾರ್ಯಕರ್ತರು, ಅತಿಥಿ ಕೆಲಸಗಾರರು, ಸಾಮಾಜಿಕ ಸಂಪರ್ಕ ಹೆಚ್ಚಾಗಿರುವ ವ್ಯಕ್ತಿಗಳ ಆದ್ಯತೆಯ ಗುಂಪುಗಳಿಂದ 2431 ಮಾದರಿಗಳನ್ನು ಸಂಗ್ರಹಿಸಿರುವುದರಲ್ಲಿ 1846 ಮಾದರಿಗಳು ಋಣಾತ್ಮಕವಾಗಿವೆ.
ರಾಜ್ಯದಲ್ಲಿ ಸೋಮವಾರ ಹೊಸ ಹಾಟ್ ಸ್ಪಾಟ್‌ಗಳಿಲ್ಲ.ಪ್ರಸ್ತುತ ಒಟ್ಟು 84 ಹಾಟ್ ಸ್ಪಾಟ್‌ಗಳಿವೆ.

 

ಕೈಗಾರಿಕೆಗಳಲ್ಲಿ ಹೂಡಿಕೆಗಳನ್ನು ಹೆಚ್ಚಿಸಲು ಕೇರಳ

ಕೋವಿಡ್ ವಿರುದ್ಧ ಹೋರಾಡುವಲ್ಲಿ ಕೇರಳದ ಅಸಾಧಾರಣ ಸಾಧನೆಯು ರಾಜ್ಯವನ್ನು ವಿಶ್ವದ ಸುರಕ್ಷಿತ ಕೈಗಾರಿಕಾ ಹೂಡಿಕೆ ಕೇಂದ್ರಗಳಲ್ಲಿ ಒಂದನ್ನಾಗಿ ಬದಲಾವಣೆ ಮಾಡಿದೆ ಇದನ್ನು ಉಪಯೋಗಿಸಿ ಕೊಳ್ಳಲಾಗುವುದೆಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ವಿಶ್ವದಾದ್ಯಂತ ಹೂಡಿಕೆದಾರರು ಮತ್ತು ಉದ್ಯಮಿಗಳಿಂದ ಕೇರಳದ ಬಗ್ಗೆ ಅನೇಕ ವಿಚಾರಣೆಗಳು ಲಭ್ಯವಾಗುತ್ತಿದೆ.  ನಮ್ಮ ಮಾನವ ಸಂಪನ್ಮೂಲವನ್ನು ಜಗತ್ತಿನ ಯಾವುದೇ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಬಹುದು ಎಂದು ಈ ಸಾಂಕ್ರಾಮಿಕದ ಮಧ್ಯೆ ನಾವು ಸಾಬೀತುಪಡಿಸಿದ್ದೇವೆ. ಈ ಎಲ್ಲ ಅಂಶಗಳನ್ನು ಗಣನೆಗೆ ತೆಗೆದುಕೊಂಡು ಕೇರಳಕ್ಕೆ ಕೈಗಾರಿಕಾ ಹೂಡಿಕೆಯನ್ನು ಮರಳಿ ತರುವ ನಿರ್ಧಾರವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದು ಮುಖ್ಯಮಂತ್ರಿ ಹೇಳಿದರು. 

ಎಲ್ಲಾ ಉದ್ಯಮದ ಲೈಸನ್ಸ್ ಮತ್ತು ಅನುಮತಿಗಳನ್ನು  ಅರ್ಜಿ ಸಲ್ಲಿಸಿದ ಒಂದು ವಾರದೊಳಗೆ ನೀಡಲಾಗುತ್ತದೆ. ಆಯ್ಕೆಗಳೊಂದಿಗೆ ಅನುಮತಿ ನೀಡಲಾಗುವುದು. ಒಂದು ವರ್ಷದೊಳಗೆ ಶೇಖರಣೆ ಕಾರ್ಯವಿಧಾನವನ್ನು ಪೂರ್ಣಗೊಳಿಸಬೇಕು. ಏನಾದರೂ ಕೊರತೆ ಇದ್ದರೆ, ಅದನ್ನು ಸರಿಪಡಿಸಲು ಸರ್ಕಾರ ಅವರಿಗೆ ಅವಕಾಶ ನೀಡುತ್ತದೆ.ತಿರುವನಂತಪುರಂ, ಎರ್ನಾಕುಲಂ, ಕೋಳಿಕೋಡ್ ಮತ್ತು ಕಣ್ಣೂರುಗಳಲ್ಲಿವಿಮಾನ ನಿಲ್ದಾಣ, ಬಂದರು, ರೈಲು, ರಸ್ತೆಯನ್ನು ಸಂಪರ್ಕಿಸುವ  ಬಹುರಾಷ್ಟ್ರೀಯ ಲಾಜಿಸ್ಟಿಕ್ಸ್ ಮೂಲಸೌಕರ್ಯಗಳನ್ನು ಸ್ಥಾಪಿಸಲಾಗುವುದು. ಇದಲ್ಲದೆ, ರಫ್ತು ಮತ್ತು ಆಮದು ಅವಕಾಶಗಳ ಲಾಭ ಪಡೆಯಲು ರಾಜ್ಯದ ವಿವಿಧ ಭಾಗಗಳಲ್ಲಿ ಲಾಜಿಸ್ಟಿಕ್ಸ್ ಉದ್ಯಾನವನಗಳನ್ನು ತೆರೆಯಲಾಗುವುದು. ಉತ್ತರ ಕೇರಳದ ಜನರ ಅಗತ್ಯಗಳನ್ನು ಪರಿಹರಿಸಲು ಅಳೀಕಲ್ ಬಂದರನ್ನು ಅಭಿವೃದ್ಧಿಪಡಿಸಲಾಗುವುದು.
ಕೃಷಿ ಕ್ಷೇತ್ರದಲ್ಲಿ ಮೌಲ್ಯವರ್ಧಿತ ಉತ್ಪನ್ನಗಳನ್ನು  ಹೆಚ್ಚಾಗಿ ಪ್ರೋತ್ಸಾಹಿಸಲಾಗುವುದು. ಪಾಲಕ್ಕಾಡ್ ಮೆಗಾ ಫುಡ್ ಪಾರ್ಕ್‌ನಲ್ಲಿರುವ ಭೂಮಿಯನ್ನು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗಾಗಿ ಕೈಗಾರಿಕೋದ್ಯಮಿಗಳಿಗೆ ಗುತ್ತಿಗೆಗೆ ನೀಡಲಾಗುವುದು. ಮೌಲ್ಯವರ್ಧನೆಗೆ ಒತ್ತು ನೀಡಿ ಉತ್ತರ ಕೇರಳದಲ್ಲಿ ತೆಂಗಿನಕಾಯಿ ಉದ್ಯಾನವನವನ್ನು ಸ್ಥಾಪಿಸಲಾಗುವುದು. ಕೇರಳವನ್ನು ಉತ್ತಮ ಕೈಗಾರಿಕಾ ಕೇಂದ್ರವನ್ನಾಗಿ ಮಾಡಲು ಸಲಹಾ ಸಮಿತಿಯನ್ನು ರಚಿಸಲಾಗುವುದು. ಉದ್ಯಮದ ಹೂಡಿಕೆಗೆ 'ಸ್ಟಾರ್ ರೇಟಿಂಗ್' ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಅವರು ಹೇಳಿದರು.
ವಿವಿಧ ರಾಜ್ಯಗಳಿಂದ ಮಲಯಾಳಿಗಳು ದೇಶಕ್ಕೆ ಹಿಂದಿರುಗಲು ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ಹಸ್ತಕ್ಷೇಪವನ್ನು ಕೋರಿ ಪ್ರಧಾನಮಂತ್ರಿಗೆ ಪತ್ರ ಕಳುಹಿಸಲಾಗಿದೆ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದರು. ದೇಶದೊಳಗಿನ ವಿವಿಧ ರಾಜ್ಯಗಳ 1,66,263 ಮಲಯಾಳಿಗಳು ದೇಶಕ್ಕೆ ಹಿಂದಿರುಗಲು ನೋರ್ಕಾ ಮೂಲಕ ನೋಂದಾಯಿಸಿಕೊಂಡಿದ್ದಾರೆ.ಅವರಿಗೆ ಈಗಿರುವ ಸ್ಥಳಗಳಿಂದ ಕೇರಳಕ್ಕೆ ತಲುಪಲು ಅನೇಕ ಅಡೆತಡೆಗಳು ಇವೆ. ಆದ್ದರಿಂದ, ಇದಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲ ಮತ್ತು ಹಸ್ತಕ್ಷೇಪದ ಅಗತ್ಯವಿದೆ. ನೋಂದಾಯಿಸಿದವರಲ್ಲಿ ಹೆಚ್ಚಿನವರು ಕರ್ನಾಟಕ - 55,188, ತಮಿಳುನಾಡು - 50,863 ಮತ್ತು ಮಹಾರಾಷ್ಟ್ರ - 22,515 ಮುಂತಾದ ರಾಜ್ಯಗಳಲ್ಲಿರುವವರು.
ರಾಜ್ಯದ ಹೊರಗಿರುವವರು ಹಿಂದಿರುಗಲು ಅಗತ್ಯವಿರುವವರನ್ನು ಮರಳಿ ಕರೆತರುವುದು ಸರ್ಕಾರದ ನೀತಿಯಾಗಿದೆ. ಇದಕ್ಕೆ ಬೇಕಾದ ಅಗತ್ಯ ವ್ಯವಸ್ಥೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ವ್ಯಕ್ತಪಡಿಸಿದರು.
ನೋರ್ಕಾ ಪೋರ್ಟಲ್‌ನಲ್ಲಿ ನೋಂದಾಯಿಸಿಕೊಂಡವರು ಅದರಲ್ಲಿ ಲಭ್ಯವಿರುವ ನೋಂದಣಿ ಸಂಖ್ಯೆಯನ್ನು ಬಳಸಿಕೊಂಡು ಕೋವಿಡ್ 19 ಜಾಗ್ರತಾ ಪೋರ್ಟಲ್ ಮೂಲಕ ಸಂಬಂಧಪಟ್ಟ ಜಿಲ್ಲಾಧಿಕಾರಿಗಳಿಂದ ಪ್ರಯಾಣದ ಅನುಮತಿ ಪಡೆಯಬೇಕು.ಗುಂಪುಗಳಾಗಿ ಬರಲು ವ್ಯವಸ್ಥೆ ಮಾಡಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಹೇಳಿದರು.

date