Skip to main content

ಕೇರಳದಲ್ಲಿ 42 ಜನರಿಗೆ ಕೋವಿಡ್ ದೃಡಪಡಿಸಲಾಗಿದೆ

* 23 ಮಂದಿ ಇತರ ರಾಜ್ಯಗಳಿಂದ ಮತ್ತು 17 ಮಂದಿ ವಿದೇಶದಿಂದ ಬಂದವರು

ರಾಜ್ಯದಲ್ಲಿ 42 ಜನರಿಗೆ ಕೂಡ  ಕೋವಿಡ್ 19 ದೃಡಪಡಿಸಿರುವುದಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಒಂದು ದಿನದಲ್ಲಿನ  ಅತಿ ಹೆಚ್ಚು ಪ್ರಕರಣಗಳು ಶುಕ್ರವಾರ ವರದಿಯಾಗಿವೆ. ಮಹಾರಾಷ್ಟ್ರದಿಂದ ಬಂದ 21‌ಮಂದಿಗೆ, ತಮಿಳುನಾಡು, ಆಂಧ್ರಪ್ರದೇಶಗಳಿಂದ ಬಂದಂತಹ ಒಬ್ಬೊಬ್ಬರಿಗೆ ಮತ್ತು ವಿದೇಶದಿಂದ ಬಂದ 17 ಜನರಿಗೆ ಈ ಕಾಯಿಲೆ ದೃಡಪಟ್ಟಿರುವುದು. ಕಣ್ಣೂರಿನಲ್ಲಿ 12, ಕಾಸರ್‌ಗೋಡಿನಲ್ಲಿ ಏಳು, ಕೋಳಿಕೋಡ್ ಮತ್ತು ಪಾಲಕ್ಕಾಡ್ ಜಿಲ್ಲೆಗಳಲ್ಲಿ ತಲಾ ಐವರಿಗೆ, ತ್ರಿಶೂರ್ ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ ನಾಲ್ವರಿಗೆ, ಕೊಟ್ಟಾಯಂನಲ್ಲಿ ಇಬ್ಬರಿಗೆ, ಕೊಲ್ಲಂ, ಪಥನಮತ್ತಿಟ್ಟ ಮತ್ತು ವಯನಾಡ್ ಜಿಲ್ಲೆಗಳಲ್ಲಿ ತಲಾ ಒಬ್ಬೊಬ್ಬರಿಗೆ ರೋಗ.

ಕಣ್ಣೂರಿನಲ್ಲಿ ಒಬ್ಬ ವ್ಯಕ್ತಿಗೆ ಸಂಪರ್ಕದ ಮೂಲಕವೂ ಮತ್ತು ಕೋಳಿಕೋಡ್‌ ಒಬ್ಬ ಆರೋಗ್ಯ ಕಾರ್ಯಕರ್ತನಿಗೆ ಸೋಂಕು ತಗುಲಿರುವುದು. ಶುಕ್ರವಾರ ಇಬ್ಬರು ಗುಣಮುಖರಾದರು. ಮುಂಬೈನಿಂದ ಚಾವಕ್ಕಾಡ್ ತಲುಪಿದ 73 ವರ್ಷದ ಖದೀಜಾಕುಟ್ಟಿ ಅವರು ಕೋವಿಡ್ ಸೋಂಕಿಗೆ ಒಳಗಾಗಿ ಗುರುವಾರ ನಿಧನರಾದರು. ಕಣ್ಣೂರು ಮತ್ತು ಮಲಪ್ಪುರಂ ಜಿಲ್ಲೆಗಳಲ್ಲಿ ತಲಾ 36 ಜನರು ಚಿಕಿತ್ಸೆಯಲ್ಲಿದ್ದಾರೆ. ಪಾಲಕ್ಕಾಡ್ 26, ಕಾಸರಗೋಡು 21, ಕೋಳಿಕೋಡ್ 19, ತ್ರಿಶೂರ್ 16 ಮುಂತಾದ ಸ್ಥಳಗಳಲ್ಲಿ ಪ್ರಸ್ತುತ ಅತೀ ಹೆಚ್ಚು ಜನರು ಚಿಕಿತ್ಸೆ ಪಡೆಯುತ್ತಿರುವುದು. ರಾಜ್ಯದಲ್ಲಿ 28 ಹಾಟ್‌ಸ್ಪಾಟ್‌ಗಳಿವೆ.

ಈವರೆಗೆ ಕೇರಳದಲ್ಲಿ 732 ಜನರಿಗೆ ಈ ರೋಗ ದೃಡಪಟ್ಟಿರುವುದು. 216 ಜನರು ಪ್ರಸ್ತುತ ಚಿಕಿತ್ಸೆಯಲ್ಲಿದ್ದಾರೆ. 84258 ಜನರು ನಿರೀಕ್ಷಣದಲ್ಲಿರುವರು.  51310 ಮಾದರಿಗಳನ್ನು ಪರೀಕ್ಷಿಸಿದರಲ್ಲಿ 49535 ನಕಾರಾತ್ಮಕವಾಗಿವೆ. ಸೆಂಟಿನೆಲ್ ಸರ್ವೈಲೆನ್ಸ್ ನ ಭಾಗವಾಗಿ  ಆದ್ಯತೆಯ ವಿಭಾಗಗಳ 7072 ಮಾದರಿಗಳನ್ನು ಪರೀಕ್ಷಿಸಿದರಲ್ಲಿ ಫಲಿತಾಂಶ ಲಭಿಸಿದ 6630 ನಕಾರಾತ್ಮಕವಾಗಿವೆ.

ಸೋಂಕಿತರ ಸಂಖ್ಯೆಯಲ್ಲಿ ಹೆಚ್ಚಳವು ಗಂಭೀರವಾದ ಎಚ್ಚರಿಕೆ ಎಂದು ಮುಖ್ಯಮಂತ್ರಿ ಹೇಳಿದರು. ಇದು ಕೋವಿಡ್ ರಕ್ಷಣೆಯನ್ನು ಹೆಚ್ಚು ಹೆಚ್ಚಿಸಬೇಕು ಎಂಬ ಸಂದೇಶವನ್ನು ನೀಡುತ್ತದೆ. ಆದರೆ ಯಾವುದೇ ಮಲಯಾಳಿ ಮುಂದೆ ಕೇರಳವು ಬೀಗ ಹಾಕಲಾಗುವುದಿಲ್ಲ ಎಂದು ಮುಖ್ಯಮಂತ್ರಿ ಹೇಳಿದರು.

date